ಮುದ್ರಿಸುವ ಚಟುವಟಿಕೆಗಳು

Be Internet Awesome ನ ಇಂಟರ್‌ಲ್ಯಾಂಡ್ ಅನ್ನು ಆಫ್‌ಲೈನ್‌ನಲ್ಲಿ ಜೀವಂತಗೊಳಿಸಿ
ಮುದ್ರಿಸುವ ಚಟುವಟಿಕೆಗಳು

CLASSROOM ಗಾಗಿ

Be Internet Awesome ಅನ್ನು ಕಲಿಸುವುದಕ್ಕೆ ಸಹಾಯ ಮಾಡಲು ಸ್ಲೈಡ್‌ಗಳೊಂದಿಗೆ ಹೊಸ ಸಂವಾದಾತ್ಮಕ ಮುದ್ರಿಸಬಹುದಾದ ಚಟುವಟಿಕೆಗಳು

Be internet Smart

ಕಾಳಜಿಯಿಂದ ಹಂಚಿಕೊಳ್ಳಿ

ಒಳ್ಳೆಯ (ಮತ್ತು ಕೆಟ್ಟ) ಸುದ್ದಿ ಆನ್‌ಲೈನ್‌ನಲ್ಲಿ ವೇಗವಾಗಿ ಪಸರಿಸುತ್ತದೆ ಮತ್ತು ಕೆಲವೊಮ್ಮೆ ಮಕ್ಕಳು ಯಾವುದೇ ಮುಂದಾಲೋಚನೆ ಇಲ್ಲದೆ ಯಾವುದಾದರೂ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಸಿಲುಕಿಕೊಳ್ಳಬಹುದು. ಪರಿಹಾರ? ತಿಳಿದವರಿಗೆ ಮತ್ತು ತಿಳಿಯದವರ ಜೊತೆಗೆ ಹೇಗೆ ಹಂಚಿಕೊಳ್ಳಬೇಕೆಂದು ಕಲಿಯುವುದು.

Be internet Alert

ನಕಲಿ ವಿಷಯಗಳಿಗೆ ಮೋಸ ಹೋಗಬೇಡಿ

ಆನ್‌ಲೈನ್‌ನಲ್ಲಿರುವ ವ್ಯಕ್ತಿಗಳು ಮತ್ತು ಸಂದರ್ಭಗಳು, ಅದರಲ್ಲಿ ಹೇಗೆ ಕಾಣುತ್ತವೆಯೋ, ಹಾಗೆಯೇ ಇರುವುದಿಲ್ಲ ಎಂಬ ಅರಿವನ್ನು ಮಕ್ಕಳಲ್ಲಿ ಮೂಡಿಸಲು ಸಹಾಯ ಮಾಡುವುದು ಬಹಳ ಮುಖ್ಯ. ಯಾವುದು ನಿಜ ಮತ್ತು ಯಾವುದು ನಕಲಿ ಎಂಬುದರ ಕುರಿತ ವಿವೇಚನೆಯು ಆನ್‌ಲೈನ್ ಸುರಕ್ಷತೆಯಲ್ಲಿ ನಿಜವಾದ ಪಾಠವಾಗಿದೆ.

Be internet Strong

ನಿಮ್ಮ ರಹಸ್ಯಗಳನ್ನು ಸುರಕ್ಷಿತಗೊಳಿಸಿ

ವೈಯಕ್ತಿಕ ಗೌಪ್ಯತೆ ಮತ್ತು ಭದ್ರತೆಗಳು ಆಫ್‌ಲೈನ್‌ನಲ್ಲಿ ಎಷ್ಟು ಮುಖ್ಯವೋ, ಆನ್‌ಲೈನ್‌ನಲ್ಲಿದ್ದಾಗ ಕೂಡ ಅಷ್ಟೇ ಮುಖ್ಯ. ಮೌಲ್ಯಯುತ ಮಾಹಿತಿಯನ್ನು ರಕ್ಷಿಸಿಕೊಳ್ಳುವುದರಿಂದ, ಅದು ಮಕ್ಕಳು ತಮ್ಮ ಸಾಧನಗಳು, ಸಾಮಾಜಿಕ ವರ್ಚಸ್ಸು ಮತ್ತು ಸಂಬಂಧಗಳಿಗೆ ಹಾನಿಯಾಗದಂತೆ ತಪ್ಪಿಸಲು ಸಹಾಯ ಮಾಡುತ್ತದೆ.

Be internet Kind

ದಯವೇ ಧರ್ಮದ ಮೂಲ

ಸಕಾರಾತ್ಮಕತೆ ಅಥವಾ ಋಣಾತ್ಮಕತೆಯನ್ನು ಹರಡಲು ಬಳಸಬಹುದಾದ ಒಂದು ಪ್ರಬಲ ವರ್ಧಕ ಇಂಟರ್‌ನೆಟ್ ಆಗಿದೆ. "ಇತರರು ನಿಮ್ಮೊಂದಿಗೆ ಹೇಗೆ ನಡೆದುಕೊಳ್ಳಬೇಕೆಂದು ನೀವು ಬಯಸುತ್ತೀರೋ, ಹಾಗೆಯೇ ನೀವು ಇತರರೊಂದಿಗೆ ನಡೆದುಕೊಳ್ಳಿ" ಎಂಬ ಸಿದ್ಧಾಂತವನ್ನು ನಿಮ್ಮ ಮಕ್ಕಳ ಆನ್‌ಲೈನ್ ಕ್ರಿಯೆಗಳಿಗೆ ಅನ್ವಯಿಸುವ ಮೂಲಕ, ಅವರು ನೈತಿಕವಾಗಿ ಉತ್ತಮವಾದ ವಿಧಾನವನ್ನು ಅಳವಡಿಸಿಕೊಳ್ಳುತ್ತಾರೆ, ಇದರಿಂದ ಇತರರಿಗೆ ಸಕಾರಾತ್ಮಕ ಪ್ರಭಾವ ಬೀರುವುದು ಮತ್ತು ಬೆದರಿಸುವ ನಡವಳಿಕೆಯನ್ನು ನಿವಾರಿಸುವುದು ಸಾಧ್ಯವಾಗುತ್ತದೆ.

Be internet Brave

ಸಂದೇಹ ಬಂದಾಗ, ಮಾತನಾಡಿ

ಯಾವುದೇ ಮತ್ತು ಎಲ್ಲಾ ಪ್ರಕಾರದ ಅನಿರೀಕ್ಷಿತ ಡಿಜಿಟಲ್ ಸನ್ನಿವೇಶಗಳಿಗೆ ಅನ್ವಯವಾಗುವ ಒಂದು ಪಾಠವೇನೆಂದರೆ: ಮಕ್ಕಳಿಗೆ ಪ್ರಶ್ನಾರ್ಹವಾದ ಏನೇ ಕಂಡುಬಂದರೂ, ಅವರು ಅದರ ಕುರಿತು ತಮ್ಮ ನಂಬುಗೆಯ ಪ್ರಾಪ್ತ ವಯಸ್ಕರೊಂದಿಗೆ ಮುಕ್ತವಾಗಿ ಮಾತನಾಡುವಂತಿರಬೇಕು. ಮನೆಯಲ್ಲಿ ಮತ್ತು ತರಗತಿಯಲ್ಲಿ ಮುಕ್ತ ಸಂವಹನವನ್ನು ಬೆಳೆಸುವ ಮೂಲಕ ವಯಸ್ಕರು ಈ ನಡವಳಿಕೆಯನ್ನು ಬೆಂಬಲಿಸಬಹುದು.