ಆನ್‌ಲೈನ್ ಜಗತ್ತಿನಲ್ಲಿ ಸುರಕ್ಷಿತ, ಆತ್ಮವಿಶ್ವಾಸದಿಂದ ಕೂಡಿದ ಅನ್ವೇಷಕರಾಗಲು ಮಕ್ಕಳಿಗೆ ಸಹಾಯ ಮಾಡುವ ಕುರಿತು.

.
ಇಂಟರ್ನೆಟ್ ಅದ್ಭುತ ವ್ಯಕ್ತಿಯಾಗಿರಲು ನಿಮ್ಮದೇ ಆದ ವಿಧಾನದಲ್ಲಿ ಆಟವಾಡಿ.ಇಂಟರ್‌ಲ್ಯಾಂಡ್ ಎಕ್ಸ್‌ಪ್ಲೋರ್ ಮಾಡಿ

ಇಂಟರ್‌ನೆಟ್‌ನ ಲಾಭ ಪಡೆಯಬೇಕಾದರೆ, ಮಕ್ಕಳು ಸ್ಮಾರ್ಟ್ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಿದ್ಧರಾಗಿರಬೇಕು. Be Internet Awesome ಮಕ್ಕಳಿಗೆ ಡಿಜಿಟಲ್ ಪೌರತ್ವ ಮತ್ತು ಸುರಕ್ಷತೆಯ ಮೂಲಭೂತ ಹಕ್ಕುಗಳನ್ನು ಕಲಿಸುತ್ತದೆ, ಇದರಿಂದಾಗಿ ಅವರು ಆನ್‌ಲೈನ್ ಜಗತ್ತನ್ನು ಆತ್ಮವಿಶ್ವಾಸದಿಂದ ಎಕ್ಸ್‌ಪ್ಲೋರ್ ಮಾಡಬಹುದು.

ಅದ್ಭುತ ಇಂಟರ್‌ನೆಟ್ ಕೋಡ್

ಮೂಲಭೂತ ಅಂಶಗಳು

Be Internet Smart

ಕಾಳಜಿಯಿಂದ ಹಂಚಿಕೊಳ್ಳಿ

ಒಳ್ಳೆಯ (ಮತ್ತು ಕೆಟ್ಟ) ಸುದ್ದಿ ಆನ್‌ಲೈನ್‌ನಲ್ಲಿ ವೇಗವಾಗಿ ಪಸರಿಸುತ್ತದೆ ಮತ್ತು ಕೆಲವೊಮ್ಮೆ ಮಕ್ಕಳು ಯಾವುದೇ ಮುಂದಾಲೋಚನೆ ಇಲ್ಲದೆ ಯಾವುದಾದರೂ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಸಿಲುಕಿಕೊಳ್ಳಬಹುದು. ಪರಿಹಾರ? ತಿಳಿದವರಿಗೆ ಮತ್ತು ತಿಳಿಯದವರ ಜೊತೆಗೆ ಹೇಗೆ ಹಂಚಿಕೊಳ್ಳಬೇಕೆಂದು ಕಲಿಯುವುದು.

ಜವಾಬ್ದಾರಿಯುತವಾಗಿ ಸಂವಹನ ನಡೆಸಿ

 • ಪರಸ್ಪರ ಸಂವಹನದಂತಹ ಆನ್‌ಲೈನ್ ಸಂವಹನವನ್ನು ಪರಿಗಣಿಸುವ ಮೂಲಕ ಚಿಂತನಶೀಲ ಹಂಚಿಕೆಯನ್ನು ಪ್ರೋತ್ಸಾಹಿಸಿ; ಹೇಳಲು ಸರಿಯಿಲ್ಲದಿದ್ದರೆ, ಪೋಸ್ಟ್ ಮಾಡಲು ಸರಿಯಿಲ್ಲ.
 • ಯಾವ ರೀತಿಯ ಸಂವಹನವು ಸೂಕ್ತವಾಗಿದೆ (ಮತ್ತು ಅಲ್ಲ) ಎಂಬುದರ ಕುರಿತು ಮಾರ್ಗಸೂಚಿಗಳನ್ನು ರಚಿಸಿ.
 • ಕುಟುಂಬ ಮತ್ತು ಸ್ನೇಹಿತರ ಕುರಿತಾದ ವೈಯಕ್ತಿಕ ವಿವರಗಳನ್ನು ಖಾಸಗಿಯಾಗಿ ಇರಿಸಿ.

Be Internet Alert

ನಕಲಿ ವಿಷಯಗಳಿಗೆ ಮೋಸ ಹೋಗಬೇಡಿ

ಆನ್‌ಲೈನ್‌ನಲ್ಲಿರುವ ವ್ಯಕ್ತಿಗಳು ಮತ್ತು ಸಂದರ್ಭಗಳು, ಅದರಲ್ಲಿ ಹೇಗೆ ಕಾಣುತ್ತವೆಯೋ, ಹಾಗೆಯೇ ಇರುವುದಿಲ್ಲ ಎಂಬ ಅರಿವನ್ನು ಮಕ್ಕಳಲ್ಲಿ ಮೂಡಿಸಲು ಸಹಾಯ ಮಾಡುವುದು ಬಹಳ ಮುಖ್ಯ. ಯಾವುದು ನಿಜ ಮತ್ತು ಯಾವುದು ನಕಲಿ ಎಂಬುದರ ಕುರಿತ ವಿವೇಚನೆಯು ಆನ್‌ಲೈನ್ ಸುರಕ್ಷತೆಯಲ್ಲಿ ನಿಜವಾದ ಪಾಠವಾಗಿದೆ.

ಸಂಭವನೀಯ ಸ್ಕ್ಯಾಮ್‌ನ ಚಿಹ್ನೆಗಳನ್ನು ತಿಳಿಯಿರಿ

 • ಏನನ್ನಾದರೂ “ಗೆಲ್ಲುವ” ಅಥವಾ “ಉಚಿತವಾಗಿ” ಪಡೆಯುವ ಕುರಿತಾದ ಬಹುತೇಕ ಹೇಳಿಕೆಗಳು ಮೇಲ್ನೋಟಕ್ಕೆ ನೈಜ ಎನ್ನಿಸುವಂತೆ ಇರುತ್ತವೆ.
 • ನ್ಯಾಯಯುತ ವಿನಿಮಯವು ಯಾವುದೇ ವೈಯಕ್ತಿಕ ಮಾಹಿತಿ ಒದಗಿಸುವುದನ್ನು ಒಳಗೊಂಡಿರಬಾರದು.
 • ಆನ್‌ಲೈನ್‌ನಲ್ಲಿ ಕ್ರಮ ಕೈಗೊಳ್ಳುವ ಮೊದಲು ಯಾವಾಗಲೂ ವಿಮರ್ಶಾತ್ಮಕವಾಗಿ ಯೋಚಿಸಿ ಮತ್ತು ನಿಮ್ಮ ಅಂತಃಪ್ರಜ್ಞೆಯನ್ನು ನಂಬಲು ಕಲಿಯಿರಿ. ಇಮೇಲ್, ಪಠ್ಯ ಅಥವಾ ಇತರ ಆನ್‌ಲೈನ್ ಸಂವಹನದಲ್ಲಿ ವಿಶ್ವಾಸಾರ್ಹ ಸಂಪರ್ಕದಂತೆ ನಟಿಸುವ ಮೂಲಕ ಲಾಗಿನ್ ಅಥವಾ ಖಾತೆಯ ವಿವರಗಳಂತಹ ಮಾಹಿತಿಯನ್ನು ಕದಿಯಲು ಮಾಡುವ ಫಿಶಿಂಗ್ ಪ್ರಯತ್ನಗಳ ಬಗ್ಗೆ ಎಚ್ಚರವಿರಲಿ.

Be Internet Strong

ನಿಮ್ಮ ರಹಸ್ಯಗಳನ್ನು ಸುರಕ್ಷಿತಗೊಳಿಸಿ

ವೈಯಕ್ತಿಕ ಗೌಪ್ಯತೆ ಮತ್ತು ಭದ್ರತೆಗಳು ಆಫ್‌ಲೈನ್‌ನಲ್ಲಿ ಎಷ್ಟು ಮುಖ್ಯವೋ, ಆನ್‌ಲೈನ್‌ನಲ್ಲಿದ್ದಾಗ ಕೂಡ ಅಷ್ಟೇ ಮುಖ್ಯ. ಮೌಲ್ಯಯುತ ಮಾಹಿತಿಯನ್ನು ರಕ್ಷಿಸಿಕೊಳ್ಳುವುದರಿಂದ, ಅದು ಮಕ್ಕಳು ತಮ್ಮ ಸಾಧನಗಳು, ಸಾಮಾಜಿಕ ವರ್ಚಸ್ಸು ಮತ್ತು ಸಂಬಂಧಗಳಿಗೆ ಹಾನಿಯಾಗದಂತೆ ತಪ್ಪಿಸಲು ಸಹಾಯ ಮಾಡುತ್ತದೆ.

ಸದೃಢ ಪಾಸ್‌ವರ್ಡ್ ರಚಿಸಿ

 • ಇದನ್ನು ಸ್ಮರಣೀಯವಾಗಿಸಿ, ಆದರೆ ಹೆಸರುಗಳು ಅಥವಾ ಜನ್ಮದಿನಗಳಂತಹ ವೈಯಕ್ತಿಕ ಮಾಹಿತಿಯನ್ನು ಬಳಸಬೇಡಿ.
 • ದೊಡ್ಡ ಅಕ್ಷರಗಳು, ಸಣ್ಣ ಅಕ್ಷರಗಳು, ಚಿಹ್ನೆಗಳು ಮತ್ತು ಸಂಖ್ಯೆಗಳ ಮಿಶ್ರಣವನ್ನು ಬಳಸಿ.
 • R3pl@ce le++ers wit# sYmb0ls & n^mb3rs 1ike Thi$.

ಅದನ್ನು ಬದಲಿಸಿ

 • ಒಂದೇ ಪಾಸ್‌ವರ್ಡ್ ಅನ್ನು ಬಹು ಸೈಟ್‌ಗಳಲ್ಲಿ ಬಳಸಬೇಡಿ.
 • ವಿಭಿನ್ನ ಖಾತೆಗಳಿಗಾಗಿ ಒಂದೇ ಪಾಸ್‌ವರ್ಡ್‌ನ ಕೆಲವು ವಿಭಿನ್ನ ರೀತಿಯ ಮಾರ್ಪಾಡುಗಳನ್ನು ರಚಿಸಿ.

Be Internet Kind

ದಯವೇ ಧರ್ಮದ ಮೂಲ

ಸಕಾರಾತ್ಮಕತೆ ಅಥವಾ ಋಣಾತ್ಮಕತೆಯನ್ನು ಹರಡಲು ಬಳಸಬಹುದಾದ ಒಂದು ಪ್ರಬಲ ವರ್ಧಕ ಇಂಟರ್‌ನೆಟ್ ಆಗಿದೆ. "ಇತರರು ನಿಮ್ಮೊಂದಿಗೆ ಹೇಗೆ ನಡೆದುಕೊಳ್ಳಬೇಕೆಂದು ನೀವು ಬಯಸುತ್ತೀರೋ, ಹಾಗೆಯೇ ನೀವು ಇತರರೊಂದಿಗೆ ನಡೆದುಕೊಳ್ಳಿ" ಎಂಬ ಸಿದ್ಧಾಂತವನ್ನು ನಿಮ್ಮ ಮಕ್ಕಳ ಆನ್‌ಲೈನ್ ಕ್ರಿಯೆಗಳಿಗೆ ಅನ್ವಯಿಸುವ ಮೂಲಕ, ಅವರು ನೈತಿಕವಾಗಿ ಉತ್ತಮವಾದ ವಿಧಾನವನ್ನು ಅಳವಡಿಸಿಕೊಳ್ಳುತ್ತಾರೆ, ಇದರಿಂದ ಇತರರಿಗೆ ಸಕಾರಾತ್ಮಕ ಪ್ರಭಾವ ಬೀರುವುದು ಮತ್ತು ಬೆದರಿಸುವ ನಡವಳಿಕೆಯನ್ನು ನಿವಾರಿಸುವುದು ಸಾಧ್ಯವಾಗುತ್ತದೆ.

ಉದಾಹರಣೆಯೊಂದನ್ನು ಹೊಂದಿಸಿ

 • ಧನಾತ್ಮಕತೆಯನ್ನು ಹರಡಲು ಇಂಟರ್‌ನೆಟ್‌ನ ಶಕ್ತಿಯನ್ನು ಬಳಸಿ.
 • ಇತರರಿಗೆ ಹಾನಿಕಾರಕ ಅಥವಾ ಅಸತ್ಯ ಸಂದೇಶಗಳನ್ನು ರವಾನಿಸದೆ ಅವುಗಳ ಹರಡುವಿಕೆಯನ್ನು ನಿಲ್ಲಿಸಿ.
 • ಇತರರ ಭಾವನೆಗಳನ್ನು ಗೌರವಿಸಿ.

ಕ್ರಮ ಕೈಗೊಳ್ಳಿ

 • ಆನ್‌ಲೈನ್‌ನಲ್ಲಿ ನೀಚ ಮನೋಭಾವದ ಅಥವಾ ಅನುಚಿತ ವರ್ತನೆಯನ್ನು ನಿರ್ಬಂಧಿಸಿ.
 • ನಿಂದನೆಗೆ ಒಳಗಾದವರಿಗೆ ಬೆಂಬಲ ನೀಡಲು ಪ್ರಯತ್ನಿಸಿ.
 • ಆನ್‌ಲೈನ್ ನಿಂದನೆ ವಿರುದ್ಧ ಮಾತನಾಡಲು ಮತ್ತು ಅದನ್ನು ವರದಿ ಮಾಡಲು ಮಕ್ಕಳನ್ನು ಪ್ರೋತ್ಸಾಹಿಸಿ.

Be Internet Brave

ಸಂದೇಹ ಬಂದಾಗ, ಮಾತನಾಡಿ

ಯಾವುದೇ ಮತ್ತು ಎಲ್ಲಾ ಪ್ರಕಾರದ ಅನಿರೀಕ್ಷಿತ ಡಿಜಿಟಲ್ ಸನ್ನಿವೇಶಗಳಿಗೆ ಅನ್ವಯವಾಗುವ ಒಂದು ಪಾಠವೇನೆಂದರೆ:ಮಕ್ಕಳಿಗೆ ಪ್ರಶ್ನಾರ್ಹವಾದ ಏನೇ ಕಂಡುಬಂದರೂ, ಅವರು ಅದರ ಕುರಿತು ತಮ್ಮ ನಂಬುಗೆಯ ಪ್ರಾಪ್ತ ವಯಸ್ಕರೊಂದಿಗೆ ಮುಕ್ತವಾಗಿ ಮಾತನಾಡುವಂತಿರಬೇಕು. ಮನೆಯಲ್ಲಿ ಮತ್ತು ತರಗತಿಯಲ್ಲಿ ಮುಕ್ತ ಸಂವಹನವನ್ನು ಬೆಳೆಸುವ ಮೂಲಕ ವಯಸ್ಕರು ಈ ನಡವಳಿಕೆಯನ್ನು ಬೆಂಬಲಿಸಬಹುದು.

ಇಂಟರ್‌ನೆಟ್‌ನಲ್ಲಿ ಧೈರ್ಯದ ನಡವಳಿಕೆಯನ್ನು ಪ್ರೋತ್ಸಾಹಿಸಿ

 • ಕುಟುಂಬ ಅಥವಾ ತರಗತಿಯ ನಿಯಮಗಳು ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ನಿರೀಕ್ಷೆಗಳು, ಹಾಗೆಯೇ ಅನುಚಿತ ಬಳಕೆಯಿಂದಾಗುವ ಪರಿಣಾಮಗಳ ಬಗ್ಗೆ ಸ್ಪಷ್ಟವಾಗಿರಿ.
 • ಆಗಾಗ್ಗೆ ಪರಿಶೀಲಿಸುವ ಮೂಲಕ ಮತ್ತು ಪ್ರಶ್ನೆಗಳನ್ನು ಕೇಳಲು ಮಕ್ಕಳನ್ನು ಪ್ರೋತ್ಸಾಹಿಸುವ ಮೂಲಕ ಸಂಭಾಷಣೆಯನ್ನು ಮುಂದುವರಿಸಿ.
 • ಶಿಕ್ಷಕರು, ತರಬೇತುದಾರರು, ಸಲಹೆಗಾರರು, ಸ್ನೇಹಿತರು ಮತ್ತು ಸಂಬಂಧಿಕರಂತಹ ಇತರ ವಿಶ್ವಾಸಾರ್ಹ ವಯಸ್ಕರೊಂದಿಗೆ ಸಂಭಾಷಣೆಯನ್ನು ವಿಸ್ತರಿಸಿ.

ಪರಿಕರಗಳು ಮತ್ತು ಮಾಹಿತಿಯ ಮೂಲಗಳು

ಸುರಕ್ಷಿತವಾಗಿ ಪ್ಲೇ ಮಾಡಿ.
ಸುರಕ್ಷಿತವಾಗಿರಲು ಕಲಿಯಿರಿ.
ಸುರಕ್ಷಿತವಾಗಿರಿ.

.
 
.

Be Internet Awesome ಪಠ್ಯಕ್ರಮ

ತರಗತಿಯಲ್ಲಿ ಆನ್‌ಲೈನ್ ಸುರಕ್ಷತೆಯನ್ನು ಕಲಿಸುವ ಶಿಕ್ಷಕರು, ISTE ಸೀಲ್ ಆಫ್ ಅಲೈನ್‌ಮೆಂಟ್ ಮತ್ತು ತರಗತಿಯ ಚಟುವಟಿಕೆಗಳನ್ನು ಸ್ವೀಕರಿಸಿದ ಪಾಠ ಯೋಜನೆಗಳನ್ನು ಡೌನ್‌ಲೋಡ್ ಮಾಡಬಹುದು, ಅವುಗಳು ಮೂಲಭೂತ ಪಾಠಗಳನ್ನು ಜೀವನಾಭ್ಯಾಸಕ್ಕೆ ತರುತ್ತವೆ.

ಡೌನ್‌ಲೋಡ್ ಮಾಡಿ
 
.

Be Internet Awesome ಪ್ರತಿಜ್ಞೆ

ಮನೆಯಲ್ಲಿ ಆನ್‌ಲೈನ್ ಸುರಕ್ಷತಾ ಸಂವಾದವನ್ನು ನಡೆಸುತ್ತಿರುವ ಪೋಷಕರು ಮೂಲಭೂತ ಅಂಶಗಳನ್ನು ಪರಿಶೀಲಿಸುವ ಮೂಲಕ ಮತ್ತು ಈ ಪ್ರತಿಜ್ಞೆಯನ್ನು ಒಟ್ಟಿಗೆ ತೆಗೆದುಕೊಳ್ಳುವ ಮೂಲಕ ಇಡೀ ಕುಟುಂಬವನ್ನು ಒಂದೇ ರೀತಿಯಲ್ಲಿ ನಡೆದುಕೊಳ್ಳಲು ಪ್ರೋತ್ಸಾಹಿಸಬಹುದು.

ಡೌನ್‌ಲೋಡ್ ಮಾಡಿ

ನಮ್ಮ ಪಾಲುದಾರರು

ಆನ್‌ಲೈನ್ ಸುರಕ್ಷತೆಯಲ್ಲಿ ತಜ್ಞರು